×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಳಂದ ಕಾಲೇಜು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಹಸ್ತಾಂತರ

ಪುತ್ತೂರು: ಮಾಜಿ ಶಾಸಕ ಚರ್ಕಳಂ ಅಬ್ದುಲ್ಲಾ ಅವರ ನೇತೃತ್ವದಲ್ಲಿದ್ದ ಪೆರ್ಲದ ನಳಂದ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನ ಆಡಳಿತವನ್ನು ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘ ಕೈಗೆತ್ತಿಕೊಂಡಿದೆ. 26-3-2015ರಂದು ನಡೆದ ಸಮಾರಂಭದಲ್ಲಿ ಕಾಲೇಜಿನ ಆಡಳಿತವನ್ನು ವಿವೇಕಾನಂದಕ್ಕೆ ಹಸ್ತಾಂತರ ಮಾಡಲಾಯಿತು.

ಶಿಸ್ತುಬದ್ಧ ಭಾರತೀಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದಕ್ಕೆ ಹೆಸರಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನಳಂದ ಕಾಲೇಜಿನ ನೇತೃತ್ವ ಸಿಕ್ಕಿರುವುದು ಕಾಸರಗೋಡಿನ ಜನತೆಗೆ ಸಂತಸ ಉಂಟು ಮಾಡಿದೆ.

ಇದರಿಂದ ಆ ಭಾಗದ ಹಲವಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಹಳಷ್ಟು ಪ್ರಯೋಜನವಾಗಲಿದೆ.