ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎನ್.ಎಸ್.ಎಸ್ ಮತ್ತು ಭೂಮಿತ್ರ ಸೇನೆ ಕ್ಲಬ್ ವತಿಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ವಿದ್ಯಾಲಯದ ಪರಿಸರವನ್ನು ಶುಚಿಗೂಳಿಸಿ ಸಸಿಗಳನ್ನು ನಟ್ಟು ಪರಿಸರದಲ್ಲಿ ಹಸಿರು ತುಂಬಲು ನೆರವಾದರು.
ಅನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಕೆ. ಕಮಲಾಕ್ಷರು ಯುವ ಜನಾಂಗ ಪ್ರಕೃತಿಯನ್ನು ಪ್ರೀತಿಸಿ, ರಕ್ಷಿಸಿದರೆ ಮುಂದೆ ಸಕಲ ಜೀವರಾಶಿಗಳಿಗಾಗುವ ದುರಂತವನ್ನು ತಪ್ಪಿಸಬಹುದು ಎಂದರು. ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ. ಶಿವಕುಮಾರರು ಮಾತಾನಾಡುತ್ತ ಮಾನವ ಪ್ರಕೃತಿಗೆ ವಿಷವನ್ನು ಬಿಡುತ್ತಾನೆ ಆದರೆ ಅದನ್ನು ಸ್ವೀಕರಿಸಿ ಸಸ್ಯಗಳು ಮಾನವನಿಗೆ ಅಮೃತವನ್ನುಣಿಸುತ್ತದೆ ಎಂದರು.
ಇಂಗ್ಲೀಷ್ ಉಪನ್ಯಾಸಕ ಕೆ. ನಾರಾಯಣ ಶೆಟ್ಟಿ, ವಿದ್ಯಾರ್ಥಿ ಹಫೀಫ್ ಪರಿಸರದ ಸಂರಕ್ಷಣೆಯ ವಿಚಾರವಾಗಿ ಮಾತನಾಡಿದರು, ಸ್ಟಾಫ್ ಕಾರ್‍ಯದರ್ಶಿ ಕೆ. ಕೇಶವ ಶರ್ಮ, ಎನ್.ಎಸ್,ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಮತ್ತು ಭೂಮಿತ್ರ ಸೇನೆ ಕ್ಲಬ್‌ನ ಸಂಚಾಲಕ ರಂಜಿತ್ ಕುಮಾರ್ ನೆಟ್ಟಣಿಗೆ ಯವರು ಉಪಸ್ಥಿತರಿದ್ದರು. ಎನ್.ಎಸ್,ಎಸ್ ಕಾರ್ಯದರ್ಶಿ ವಿಕಾಸ್ ಸ್ವಾಗತಿಸಿ, ಭೂಮಿತ್ರ ಸೇನೆ ಕ್ಲಬ್‌ನ ಕಾರ್ಯದರ್ಶಿ ಮಾಕ್ಸಿಂ ರೋಡ್ರಿಗಸ್ ವಂದಿಸಿದರು. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ವಿಶ್ವಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡರು.