ನಾಲಂದ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಪೆರ್ಲ ಇದರ ಜಂಟಿ ಆಶ್ರಯದಲ್ಲಿ ತಾರೀಕು 31-12-2023 ರಂದು ನಾಲಂದ ಕಾಲೇಜು ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ (ಕೆ ಪಿ ಎಸ್ ಸಿ) ವನ್ ಟೈಮ್ ರಿಜಿಸ್ಟ್ರೇಷನ್ ಹಾಗೂ ಕೋಚಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಜೆ ಎಸ್ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಇವರು ಈ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸ ಬೇಕೆಂಬ ಹಂಬಲ ಮೊದಲೇ ಇತ್ತು ಆದರೆ ಅದು ಸಾಧ್ಯವಾಗಲಿಲ್ಲ ಆದರೆ ಈಗ ನಾಲಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಡೇರಿದೆ, ಸರಕಾರಿ ವಲಯದಲ್ಲಿ ಈ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡಕೊಳ್ಳುವಲ್ಲಿ ಈ ತರಬೇತಿ ಕೇಂದ್ರ ಪೂರಕವಾಗಲಿ ಎಂದರು. ಹಾಗು ಶ್ರೀ ಗಣೇಶ್ ಪ್ರಸಾದ್ ಪಾಣುರು, ನಿವೃತ್ತ ಅಂಡರ್ ಸೆಕ್ರೆಟರಿ ಕೆ ಪಿ ಎಸ್ ಸಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇವರು ಶುಭಾಶಂಸನೆಗೈದರು.
ಹಾಗೂ ಶ್ರೀ ಶಶಿಭೂಷಣ ಶಾಸ್ತ್ರಿ, ಸದಸ್ಯರು ನಾಲಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸ್ಥಾನವನ್ನು ವಹಿಸಿದರು , ಶ್ರೀ ರಾಜಶೇಖರ್ ಪೆರ್ಲ, ಆಡಳಿತ ಮಂಡಳಿ ಸದಸ್ಯರು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಪೆರ್ಲ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀ ಶಂಕರ ಖಂಡಿಗೆ ಸ್ವಾಗತಿಸಿದರು. ವಾಣಿಜ್ಯ ಸಹಾಯಕ ಪ್ರಾಧ್ಯಾಪಕ ಮನೋಜ್ ಕುಮಾರ್ ಪಿ ವಂದಿಸಿದರು. ಹಾಗು ವಾಣಿಜ್ಯ ಸಹಾಯಕ ಪ್ರಾಧ್ಯಾಪಕಿ ನಿಶ್ಮಿತಾ ಕಾರ್ಯಕ್ರಮವನ್ನು ನಿರೂಪಸಿದರು.