ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ವಾರ್ಷಿಕ ಮಹಾಸಭೆ ಮೇ 26 ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ನಾಲಂದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಆನೆಮಜಲು ವಿಷ್ಣು ಭಟ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ವರದಿ ವಾಚನ ಮಾಡಿದರು. ಖಜಾಂಜಿ ಶ್ರೀಯುತ ಗೋಪಾಲ ಚೆಟ್ಟಿಯಾರ್ ಲೆಕ್ಕಪತ್ರ ಮಂಡಿಸಿದರು. ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ಒಂದು ವರ್ಷದ ಸಿಂಹಾವಲೋಕನದಲ್ಲಿ ಮಹಾವಿದ್ಯಾಲಯ ಕಂಡ ಕಷ್ಟ ಸುಖಗಳನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಆದರ್ಶ ಎಂಬಂತೆ ಬೆಳೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ನಾಲಂದ ಸಂಸ್ಥೆಯ ಮಾರ್ಗದರ್ಶಕರಾದ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಶಿಕ್ಷಣ ಕೇಂದ್ರಗಳು ಸಂಸ್ಕಾರ ಕೇಂದ್ರಗಳಾಗಬೇಕು. ರಾಷ್ಟ್ರೀಯ ಕೇಂದ್ರಗಳಾಗಬೇಕು ಎಂದರು. ಆಡಳಿತ ಸಮಿತಿ ಸದಸ್ಯ ಶ್ರೀಯುತ ರಾಜಶೇಖರ್ ಸ್ವಾಗತಿಸಿದ್ದು ಸದಸ್ಯೆ ಶ್ರೀಮತಿ ಪ್ರಭಾವತಿ ವಂದಿಸಿದರು. ನಾಲಂದದ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಕೆ. ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.