ಪೆರ್ಲ : ನಾಲಂದ ಕಾಲೇಜಿನಲ್ಲಿ ಎನ್.ಎಸ್.ಎಸ್ ವತಿಯಿಂದ ಅಂತಾರಾಷ್ಟ್ರೀಯ ತೇವ ಭರಿತ ಭೂಪ್ರದೇಶ ದಿನ ವನ್ನು ಆಚರಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಕಾಲೇಜಿನ ಭೂಮಿಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಸಾಜಿದ ಸಿ.ಎಚ್ರವರು ತೇವ ಭರಿತ ಭೂಮಿಯ ಮಹತ್ವಗಳನ್ನು ತಿಳಿಸಿದ್ದಲ್ಲದೆ ಇಂದು ಅದನ್ನು ನಾಶ ಮಾಡುತ್ತಿದ್ದೇವೆ, ಅದರ ಸಂರಕ್ಷಣೆ ಮಾಡಿದರೆ ಮಾತ್ರ ನಮ್ಮ ಬದುಕು ಸುಖಮಯವಾಗಬಲ್ಲದು ಎಂದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆಯವರು ಎಲ್ಲಾ ಜೀವಿಗಳಿಗೂ ತೇವಭರಿತ ಭೂಪ್ರದೇಶ ಅತ್ಯಾವಶ್ಯಕ. ಅದನ್ನು ಯಾವುದೇ ರೀತಿಯಲ್ಲಿ ಹಾಳುಗೆಡಹದೆ ಸಂರಕ್ಷಿಸಿಕೊಂಡು ಬರಬೇಕಾಗಿರುವುದು ನಮ್ಮ ಧರ್ಮ ಎಂದರು. ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ಮ್ಯಾಕ್ಸಿಮ್ ರೋಡ್ರೀಗಸ್, ಶಿಹಾಬ್, ಮುರ್ಶಿದ್, ಅರ್ಪಿತ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ಎನ್.ಎಸ್.ಎಸ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದರು.