ಎಣ್ಮಕಜೆ ಗ್ರಾ.ಪಂ.ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಕ್ಷಯರೋಗ ನಿಯಂತ್ರಣಾ ಘಟಕ ಕಾಸರಗೋಡು ಹಾಗೂ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸಸ್ ಘಟಕದ ಸಹಯೋಗದಲ್ಲಿ ವಿಶ್ವ ಕ್ಷಯರೋಗ ನಿಯಂತ್ರಣಾ ದಿನಾಚರಣೆ ಅಂಗವಾಗಿ ಪೆರ್ಲ ಪೇಟೆ ಹಾಗೂ ನಾಲಂದ ಕಾಲೇಜಿನಲ್ಲಿ ಜನ ಜಾಗೃತಿ ಕಾರ್ಯಕ್ರಮಗಳು ನಡೆದವು.
ಪೆರ್ಲ ಪೇಟೆಯಲ್ಲಿ ನಡೆದ ಕಾರ್ರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಡಿಟಿಸಿ ಕಾಸರಗೋಡು ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ.,ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ, ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಉಪಸ್ಥಿತರಿದ್ದರು.ಕುಟುಂಬ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಕ್ರಿಸ್ಟಿ ಇಸಾಬೆಲ್ ಡೇನಿಯಲ್ ಸ್ವಾಗತಿಸಿದರು.ಆರೋಗ್ಯಾಧಿಕಾರಿ ಸಜಿತ್ ವಂದಿಸಿದರು.ಕ್ಷಯ ರೋಗ ನಿವಾರಣೆ ಸಂಬಂಧಿಸಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸಸ್ ವಿದ್ಯಾರ್ಥಿಗಳು ಬೀದಿ ನಾಟಕ ಹಾಗೂ ನೃತ್ಯ ಆವಿಷ್ಕಾರಗಳನ್ನು ನಡೆಸಿ ಕೊಟ್ಟರು.
ನಾಲಂದ ಕಾಲೇಜಿನಲ್ಲಿ ಡಾ.ನಾರಾಯಣ ಪ್ರದೀಪ್ ನೇತೃತ್ವದಲ್ಲಿ ಕ್ಷಯ ರೋಗ ನಿಯಂತ್ರಣ ಹಾಗೂ ರೋಗ ಲಕ್ಷಣಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.