ನಾಲಂದ ಸ್ಕಿಲ್ ಡೆವೆಲ್‍ಪ್‍ಮೆಂಟ್ ಸೆಂಟರ್‍ನ ನೇತ್ರತ್ವದಲ್ಲಿ ಕಂಪ್ಯೂಟರ್ ವಾಲ್ ಮೆಗಜಿನ್‍ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಕೇರಳ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ – ಕಾಸರಗೋಡು ಡಿಸ್ಟ್ರಿಕ್ಟ್ ಇದರ ಅಧ್ಯಕ್ಷರು ಆಗಿರುವ ಶ್ರೀ ರಾಜಾರಾಮ ಪೆರ್ಲ ಇವರು ಕಂಪ್ಯೂಟರ್ ವಾಲ್ ಮೆಗಜಿನ್ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಶೇಣಿ, ಸ್ಟುಡೆಂಟ್ ವೆಲ್‍ಫೇರ್ ಆಫೀಸರ್ ಶ್ರೀ ಕೇಶವ ಶರ್ಮ,ಸ್ಟಾಫ್ ಸೆಕ್ರೇಟರಿ ಶ್ರೀ ಶಂಕರ, ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕಂಪ್ಯೂಟರ್ ಇನ್‍ಸ್ಟ್ರಕ್ಟರ್ ಕು| ಲಕ್ಷ್ಮೀತಾ ಸ್ವಾಗತಿಸಿದರು.ಹುಫೈದ ಫರ್ಜಾನ ವಂದಿಸಿದರು.ಉಷಾಕುಮಾರಿ ಬಿ. ನಿರೂಪಿಸಿದರು.