ಗ್ರಾಮ ವಿಕಾಸ ಯೋಜನೆ ನಾಲಂದಾ ಮಹಾವಿದ್ಯಾಲಯ,ಪೆರ್ಲ ಹಾಗೂ ನಾಲಂದಾ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಒಂದು ದಿನದ ಜೇನು ಕೃಷಿ ಮಾಹಿತಿ ಶಿಬಿರ ನಾಲಂದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಶ್ರೀ ಪದ್ಮರಾಜ ಪಟ್ಟಾಜೆ (ನಿರ್ದೇಶಕರು ಕ್ಯಾಂಪ್ಕೋ ಲಿ) ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕಿಶೋರ್ ಕುಮಾರ್ ರೈ ಸಭಾಧ್ಯಕ್ಷತೆಯನ್ನು ವಹಿಸಿದರು ಕಾಲೇಜು ಆಡಳಿತ ಮಂಡಳಿ ಸದಸ್ಯ ಶ್ರೀ ರಾಜಶೇಖರ ಅವರು ಕಾರ್ಯಕ್ರಮಕ್ಕೆ ಶಭ ಹಾರೈಸಿದರು.ಕಾಮರ್ಸ್ ವಿಭಾಗದ ಪ್ರಾಧ್ಯಾಪಕ ಶ್ರೀನಿಧಿ.ಕೆ ಸ್ವಾಗತಿಸಿ ವಂದಿಸಿದರು.ತದ ನಂತರ ಜೇನು ಕೃಷಿಯ ಬಗ್ಗೆ ಶ್ರೀ ಪದ್ಮರಾಜ ಪಟ್ಟಾಜೆ ಅವರು ಮಾಹಿತಿ ನೀಡಿದರು.