ಪೆರ್ಲದಲ್ಲಿ ಬೆಟಗೇರಿ ಸಾಹಿತ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಪ್ರೊ.ರಾಘವೇಂದ್ರ ಪಾಟೀಲ
ಶ್ರೇಷ್ಠ ಸಾಹಿತಿ, ಆದರ್ಶ ಪತ್ರಕರ್ತ ಬೆಟಗೇರಿ ಕೃಷ್ಣಶರ್ಮರು ತಮ್ಮ ಜಯಂತಿ ಪತ್ರಿಕೆಯ ಮೂಲಕ ನೂರಾರು ಬರಹಗಾರರನ್ನು ಪ್ರೋತ್ಸಾಹಿಸಿದರು.ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುತ್ತಲೇ ಸಾಹಿತ್ಯವನ್ನು ರಚಿಸುತ್ತಾ ಬಂದ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ಕನ್ನಡ ಸಾಹಿತ್ಯದ ನವೋದಯ ಮಾರ್ಗ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದವರು ಎಂದು ಬೆಳಗಾವಿಯ ಡಾ.ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೋ ರಾಘವೇಂದ್ರ ಪಾಟೀಲ ಹೇಳಿದರು.
ಡಾ.ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ನಾಲಂದ ಮಹಾವಿದ್ಯಾಲಯ ಪೆರ್ಲ ಸಂಯುಕ್ತಾಶ್ರಯದಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಡಾ.ಬೆಟಗೇರಿ ಕೃಷ್ಣಶರ್ಮರ ಸಾಹಿತ್ಯ ಸಮೀಕ್ಷೆ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖ್ಯಾತ ಕವಿ,ಕಾದಂಬರಿಕಾರ ಡಾ.ನಾ ಮೊಗಸಾಲೆ ಕಾಂತಾವರ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಜಾನಪದ ಸಂಶೋಧನೆ, ಸಣ್ಣಕತೆ, ಕಾದಂಬರಿ ಕ್ಷೇತ್ರ ಮತ್ತು ಪತ್ರಿಕಾರಂಗ ಇವುಗಳಿಗೆ ಬೆಟಗೇರಿಯವರ ಕೊಡುಗೆ ಅಮೂಲ್ಯವಾದುದು ಎಂದರು.ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ,ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ ಕುಮಾರ್ ರೈ ಶೇಣಿ ಶುಭ ಹಾರೈಸಿದರು.
ಡಾ.ಬೇಸಿ ಗೋಪಾಲಕೃಷ್ಣ, ಡಾ.ಪ್ರಮೀಳ ಮಾಧವ ಬೆಂಗಳೂರು , ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಮೋಹನ ಕುಂಟಾರು ಹಂಪಿ, ಡಾ.ಸುಭಾಷ್ ಪಟ್ಟಾಜೆ, ಕವಿತಾ ಕೂಡ್ಲು ಪ್ರಬಂಧ ಮಂಡಿಸಿದರು.
ಡಾ.ಕಿಶೋರ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೋ.ರಾಘವೇಂದ್ರ ಪಾಟೀಲ, ರಾಜಾರಾಮ ಪೆರ್ಲ, ಆಯಿಷಾ ಪೆರ್ಲ ಮಾತನಾಡಿದರು.ಕಾಲೇಜು ವಿದ್ಯಾರ್ಥಿಗಳು ಆನಂದಕಂದರ ಕವಿತೆಗಳನ್ನು ಹಾಡಿದರು.ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಬಾಲಮಧುರಕಾನನ, ಡಾ.ಕೆ.ಕಮಲಾಕ್ಷ, ಪ್ರೊ.ಎ.ಶ್ರೀನಾಥ್, ಹರೀಶ ಪೆರ್ಲ, ನರಸಿಂಹ ಭಟ್ ಏತಡ್ಕ, ಡಾ.ಯು.ಮಹೇಶ್ವರಿ, ಮಹಮ್ಮದಾಲಿ ಪೆರ್ಲ ಉಪಸ್ಥಿತರಿದ್ದರು.
ಬೆಟಗೇರಿ ಟ್ರಸ್ಟ್ ನ ವಿಕಾಸ್ ಹೊಸಮನಿ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಜೊತೆ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಂದಿಸಿದರು. ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ ಪಿ.ಎನ್ ಮೂಡಿತ್ತಾಯ ಮತ್ತು ನಾಲಂದ ಕಾಲೇಜು ಸಹ ಪ್ರಾಧ್ಯಾಪಕ ಕೇಶವ ಶರ್ಮ ನಿರೂಪಿಸಿದರು.