×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದಕ್ಕೆ ಉರಿಮಜಲು ರಾಂಭಟ್ ಭೇಟಿ

ಪೆರ್ಲ : ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಂಭಟ್ ಅವರು ಇಲ್ಲಿನ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಕಾಸರಗೋಡು ಜಿಲ್ಲೆಯಲ್ಲಿಯೇ ಒಂದು ಅತ್ಯಪೂರ್ವ ಶಿಕ್ಷಣ ಸಂಸ್ಥೆಯಾಗಿ ನಾಲಂದ ಕಾಲೇಜು ಬೆಳೆಯಬೇಕಿದೆ. ಇಲ್ಲಿಯ ಸ್ಥಳೀಯ ಜನತೆ ಹೆಚ್ಚು ಶ್ರದ್ಧೆಯಿಂದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯನ್ನು ಒಂದು ತಪಸ್ಸಿನಂತೆ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಇಲ್ಲಿಯ ವಿದ್ಯಾರ್ಥಿಗಳು ದೂರದ ನಗರಗಳಿಗೆ ಹೋಗುವ ಪ್ರಮೇಯ ಬಹಳ ಬೇಗನೆ ಕಡಿಮೆಯಾಗಲಿ. ಇನ್ನಷ್ಟು ಆಕರ್ಷಕ ಕೋರ್ಸುಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಸಂಸ್ಥೆಯನ್ನು ಬೆಳೆಸಬೇಕೆಂದು ಅವರು ಹಾರೈಸಿದರು.

ಮಾಜಿ ಶಾಸಕರ ಭೇಟಿ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ, ಆಡಳಿತಾಧಿಕಾರಿ ಕೆ. ಶಿವಕುಮಾರ, ಆಡಳಿತ ಸಮಿತಿಯ ಶಂ. ನಾ. ಖಂಡಿಗೆ, ರಾಜಶೇಖರ, ಟಿ. ಪ್ರಸಾದ್, ಗಣೇಶ್ ಶೆಟ್ಟಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ಗುಣಪಾಲ ಜೈನ್, ಮುಂತಾದವರು ಹಾಜರಿದ್ದರು.

DSC01221