×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

Kargil Vijay Diwas

ನಮ್ಮ ದೇಶದ ಗಡಿಗಳಲ್ಲಿ ಹಗಲು-ರಾತ್ರಿ ಮಳೆ-ಚಳಿಯನ್ನು ಲೆಕ್ಕಿಸದೆ ದೇಶ ರಕ್ಷಣೆಯ ಹೊಣೆ ಹೊತ್ತ ಸೈನಿಕರು ಸದಾ ಎಚ್ಚರದಲ್ಲಿರುವುದರಿಂದ ನಾವು‌ ನಿರ್ಭೀತಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಪೆರ್ಲ ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಶೇಣಿ ಹೇಳಿದರು.

ಕಾಲೇಜು ಎನ್ನೆಸ್ಸೆಸ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ದೇಶರಕ್ಷಣೆಯ ಇತಿಹಾಸದಲ್ಲಿ ಕಾರ್ಗಿಲ್ ಘಟನೆ ಚಿರ ಸ್ಮರಣೀಯ ಹಾಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. ಯುದ್ಧದ ಸಂದರ್ಭದಲ್ಲಿ ಭಾರತೀಯ ಸೈನಿಕರು ತೋರಿದ ಸಾಹಸವನ್ನು ಯಾರಿಂದಲೂ ಮರೆಯಲಾಗದು‌. ಯುದ್ದ ಭೂಮಿಯಲ್ಲಿ ಕೆಚ್ಚದೆಯಲ್ಲಿ ಹೋರಾಡಿದ, ಪ್ರಾಣತೆತ್ತ ವೀರ ಸೈನಿಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ವೀರ ಸೈನಿಕರ ಸೇವೆ, ತ್ಯಾಗವನ್ನು ನೆನಪಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ, ದೇಶದ ಬಗ್ಗೆ ಅಭಿಮಾನ ಮೂಡಿಸಲು ಕಾರ್ಗಿಲ್ ದಿನಾಚರಣೆ ಪ್ರೇರಣೆಯಾಗಲಿ ಎಂದರು.

ಎನ್ನೆಸ್ಸೆಸ್ ಪ್ರೋಗ್ರಾಂ ಆಫೀಸರ್ ಪ್ರಜಿತ್, ಕಾರ್ಯದರ್ಶಿಗಳಾದ ಶರಣ್ಯ, ವಿನಾಯಕ, ನವೀನ್ ರಾಜ್ ಉಪಸ್ಥಿತರಿದ್ದರು. ಕಾರ್ತಿಕ್ ಸ್ವಾಗತಿಸಿದರು. ಧನ್ಯ ವಂದಿಸಿದರು. ಸುರೇಶ್ ನಿರೂಪಿಸಿದರು.