ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಜಾಗತಿಕ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಅಧ್ಯಾಪಕ ಶ್ರೀ ನಾರಯಣ ಶೆಟ್ಟಿ ಜಿ.ಎಚ್.ಎಸ್.ಎಸ್ ಅಂಗಡಿಮೊಗರು ಮಾತನಾಡಿ, ಅಂಧವಿಶ್ವಾಸ, ಜನನ ದರ ಹೆಚ್ಚಳ-ಮರಣ ದರ ಕಡಿಮೆಯಾಗುವ ಮೂಲಕ ಜನಸಂಖ್ಯಾ ಸಮಸ್ಯೆ ಉಂಟಾಗುತ್ತಿದೆ ಎಂದು ವ್ಯಕ್ತಪಡಿಸಿದರು. ಹಾಗು ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಂವಹನ ಮಾಡುವ ಮೂಲಕ ತಿಳುವಳಿಕೆ ಮೂಡಿಸಿದರು.
ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸಂಖ್ಯಾ ಸ್ಪೋಟದಿಂದ ಆರ್ಥಿಕತೆಯ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಆತಂಕ ವ್ಯಕ್ತಪಡಿಸಿದರು.