×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ರಸ್ತೆ ಸುರಕ್ಷತೆ ಕುರಿತು ಕಾರ್ಯಾಗಾರ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಕಾಸರಗೋಡು ಮೋಟಾರು ವಾಹನ ವಿಭಾಗದ ಪರಿಶೋಧಕರಾದ ದಿನೇಶ್ ಕುಮಾರ್ ವಿ.ಕೆ. ಅವರ ನೇತೃತ್ವದಲ್ಲಿ ’ರಸ್ತೆ ಸುರಕ್ಷತೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಇದರ ಸಂಪನ್ಮೂಲ ವ್ಯಕ್ತಿಯಾಗಿ ಅದೇ ವಿಭಾಗದ ಸಹ ಪರಿಶೋಧಕರಾದ ಪ್ರದೀಪ್ ಕುಮಾರ್ ಸಿ.ಎ. ಭಾಗವಹಿಸಿದ್ದರು. ಇವರು ವಾಹನ ಚಾಲನೆಗಿರುವ ನಿಯಮ ಪಾಲನೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಮಾಹಿತಿ ಒದಗಿಸಿದರು.

20150810_124233

20150810_124216

ವಾಹನ ಚಾಲನೆ ಸಮಯದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಕೊಡುವ ಶಿಕ್ಷೆಗಳ ಬಗ್ಗೆ ನೆನಪಿಸಿದ ಪ್ರದೀಪ್ ಕುಮಾರ್ ಅಶ್ರದ್ಧೆ ಮತ್ತು ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂದರು. ಅನುಭವವಿಲ್ಲದ ಮತ್ತು ಇದೀಗ ಕಲಿತು ಇನ್ನೂ ಪರಿಣತರಾಗದ ಚಾಲಕರಿಂದ ಅಪಾಯಗಳು ಹೆಚ್ಚುತ್ತಿವೆ. ಚಾಲಕರು ಕಡ್ಡಾಯವಾಗಿ ನಿಯಮವನ್ನು ಅನುಸರಿಸುವುದು, ಹೆಲ್ಮೆಟ್, ಸೀಟ್ ಬೆಲ್ಟ್‌ಗಳನ್ನು ಉಪಯೋಗಿಸುವುದು, ಮಿತಿಮೀರಿದ ವೇಗವನ್ನು ಕಡಿಮೆಮಾಡುವುದು, ಅಮಲು ಪದಾರ್ಥ ಸೇವಿಸಿದ ಹೊತ್ತಿನಲ್ಲಿ ವಾಹನ ಚಾಲನೆ ಮಾಡದಿರುವುದು, ಚಾಲನೆಯ ವೇಳೆಗೆ ಸ್ಪರ್ಧೆಗಳಿಂದ ದೂರವುಳಿಯುವುದು ಮುಂತಾದ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಬರುವ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಮನದಟ್ಟುಮಾಡಿದರು. ಪ್ರೋಜೆಕ್ಟರ್ ಮೂಲಕ ಕೆಲವು ಅಪಘಾತದ ಘಟನೆಯ ದೃಶ್ಯಗಳನ್ನು ತೋರಿಸಿದ ಅವರು ಜಾಗರೂಕತೆ ಹಲವು ಜೀವಗಳನ್ನು ಉಳಿಸಬಹುದು ಎಂಬುದನ್ನು ಬಿಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಕಮಲಾಕ್ಷ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ಮೊಟ್ಟಕುಂಜ ಸ್ವಾಗತಿಸಿ ವಿದ್ಯಾರ್ಥಿ ಮುಹಮ್ಮದ್ ಆಸೀಫ್ ವಂದಿಸಿದರು. ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿ ಬಳಗ ಈ ಕಾರ್ಯಾಗಾರದ ಪ್ರಯೋಜನ ಪಡೆಯಿತು.