ಮುಳ್ಳೇರಿಯಾದ ಜಿ ವಿ ಎಚ್ ಎಸ್ ಎಸ್ ನಲ್ಲಿ ವ್ಯಾಸಂಗ ಮಾಡಿದ ಕೋಟೂರಿನ ಶ್ರೀ ನಾರಾಯಣ ಮತ್ತು ಶ್ರೀಮತಿ ರೇವತಿ ಅವರ ಪುತ್ರಿ ಕು. ನಿವೇದಿತಾ ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ಬಿಕಾಂ ಪದವಿಗೆ ಪ್ರವೇಶಾತಿ ಪಡೆದರು. ಆಡಳಿತ ಮಂಡಳಿಯ ಶ್ರೀ ಗೋಪಾಲ ಚೆಟ್ಟಿಯಾರ್ ಪ್ರವೇಶಾತಿ ಪತ್ರ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ। ಕಮಲಾಕ್ಷ , ಆಡಳಿತಾಧಿಕಾರಿ ಶ್ರೀ ಶಿವಕುಮಾರ್ , ಆಡಳಿತ ಮಂಡಳಿಯ ಶ್ರೀಮತಿ ಪ್ರಭಾವತಿ, ಶ್ರೀ ರಾಜಶೇಖರ್, ಶಂ. ನಾ. ಖಂಡಿಗೆ ಹಾಗು ನಿವೇದಿತಾ ತಾಯಿ ಶ್ರೀಮತಿ ರೇವತಿ ಹಾಜರಿದ್ದರು.
ಕು. ನಿವೇದಿತಾ ಅವರ ಮನೆಯ ಬಡತನ, ತಂದೆಯ ಅನಾರೋಗ್ಯ ಮತ್ತು ಮನೆಯ ನಿವೇಶನ ಹಕ್ಕು ಕೂಡ ದೊರಕಿರದ ಸ್ಥಿತಿಯ ಬಗ್ಗೆ ಇತ್ತೀಚೆಗೆ ಮಾಧ್ಯಮಗಳು ಬೆಳಕು ಚೆಲ್ಲಿದ್ದವು. ನಿವೇದಿತಾ ವಿದ್ಯಾಭ್ಯಾಸದ ಪೂರ್ತಿ ಮೊತ್ತವನ್ನು ಶಿಕ್ಷಕರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳು ತುಂಬಿಕೊಡಲು ಮುಂದೆ ಬಂದಿದ್ದು ಕು. ನಿವೇದಿತಾ ವಿದ್ಯಾಭ್ಯಾಸಕ್ಕೊಂದು ಹೊಸ ದಿಕ್ಕನ್ನು ಮೂಡಿಸಿದೆ.