×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಶಾಸ್ತ್ರಗಳ ಅರ್ಥಗಳನ್ನು ಒಟ್ಟು ಸೇರಿಸಿ ಆಚರಣೆಗೆ ತಂದಾಗ ಸಮಾಜದ ಉನ್ನತಿ

ನಾಲಂದ ಮಹಾವಿದ್ಯಾಲಯದಲ್ಲಿ ‘ಗುರು ವಂದನಂ’ ಕಾರ್ಯಕ್ರಮದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್

ಶಾಸ್ತ್ರಗಳ ಅರ್ಥಗಳನ್ನು ಒಟ್ಟು ಸೇರಿಸಿ ಆಚರಣೆಗೆ ತಂದಾಗ ಸಮಾಜ ಉನ್ನತಿಗೇರುವುದು.ನಮ್ಮ ವಿವೇಚನೆ ಮತ್ತು ಆತ್ಮವಿಶ್ವಾಸ ಧೃಡವಾಗಿದ್ದರೆ, ಹೊಸತನ್ನು ಆಲೋಚಿಸಿ ದೃಢ ಸಂಕಲ್ಪದೊಂದಿಗೆ ಹೊಸತನ್ನು ಮಾಡಲು ಪ್ರಯತ್ನಿಸಿದರೆ ನಾವು ಏನು ಬೇಕಾದರೂ ಸಾಧಿಸಬಹುದು. ಹಲವರ ಪ್ರಯತ್ನ ಹಾಗೂ ಇನ್ನೂ ಕೆಲವರ ಸಹಕಾರದಿಂದ ನಾಲಂದಾ ವಿದ್ಯಾ ಸಂಸ್ಥೆ ಬೆಳೆದು ಉತ್ತುಂಗಕ್ಕೇರಿದ್ದು ಎಣ್ಮಕಜೆ ಪಂಚಾಯಿತಿಯ ಪಾಲಿಗೆ ಅಭಿವೃದ್ಧಿಯ ಕೇಂದ್ರ ಬಿಂದುವಾಗಿದೆ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ನಾಲಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ನಡೆದ ‘ಗುರು ವಂದನಂ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಕೈಜೋಡಿಸಿ ಸಹಕರಿಸಿದಲ್ಲಿ ವಿದ್ಯಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬಹುದು ಎಂದರು.

ಸಾಹಿತಿ, ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಉಪನ್ಯಾಸಕ, ಪೆರ್ಲ ನಾಲಂದ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಡಾ.ಕೆ.ಕಮಲಾಕ್ಷ, ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಉಪನ್ಯಾಸಕ, ಪೆರ್ಲ ನಾಲಂದ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಶಂಕರ ನಾರಾಯಣ ಹೊಳ್ಳ, ಪುತ್ತೂರು ವಿವೇಕಾನಂದ ಕಾಲೇಜು ನಿವೃತ್ತ ಉಪನ್ಯಾಸಕ, ನಾಲಂದ ಕಾಲೇಜು ನಿಕಟಪೂರ್ವ ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ, ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್ ನಿವೃತ್ತ ಮುಖ್ಯ ಶಿಕ್ಷಕ, ನಾಲಂದ ಕಾಲೇಜು ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಕುಮಾರ್, ನಾಟಿ ವೈದ್ಯ, ಕಾಟುಕುಕ್ಕೆ ಬಾಲಪ್ರಭಾ ಎಯುಪಿ ಶಾಲೆ ನಿವೃತ್ತ ಶಿಕ್ಷಕ ಶಂಕರ ನಾರಾಯಣ ಭಟ್ ಪರಪ್ಪಕರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ, ಶಿಕ್ಷಕರ ಚಾರಿತ್ರ್ಯ, ಗುಣ ನಡತೆ ಚೆನ್ನಾಗಿದ್ದಲ್ಲಿ ವಿದ್ಯಾಸಂಸ್ಥೆಯ ಅಡಿಪಾಯ ಸುಭದ್ರವಾಗಿರುವುದು. ಶಿಕ್ಷಕರು ವಿದ್ಯಾ ಸಂಸ್ಥೆಯೊಂದಿಗೆ ಅಭಿಮಾನ ಹೊಂದಿರಬೇಕು.ವಿದ್ಯಾರ್ಥಿಗಳ ಮಿತ್ರನಾಗಿರಬೇಕು ಎಂದರು.

ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ, ಖಜಾಂಚಿ ಗೋಪಾಲ ಚೆಟ್ಟಿಯಾರ್ ಶುಭ ಹಾರೈಸಿದರು.ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಸ್ವಾಗತಿಸಿದರು.ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಉಪನ್ಯಾಸಕ ಸುರೇಶ್ ಕೆ.ಎಂ.ವಂದಿಸಿದರು.ಹಿಂದಿ ಉಪನ್ಯಾಸಕಿ ಶಾಂಭವಿ ನಿರೂಪಿಸಿದರು.