ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸಕಿ ವಿನೀಷಾ
ಇಂದಿನ ಆಧುನಿಕ ಯುಗದಲ್ಲಿ ಕೆಲವೆಡೆಗಳಲ್ಲಿ ಮಹಿಳೆ ಶೋಷಣೆಯ ವಸ್ತುವಾಗಿ ಬಳಸಿಕೊಳ್ಳಲಾಗುತ್ತಿದ್ದು, ದಿನೇ ದಿನೇ ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸ್ತ್ರೀಯರ ರಕ್ಷಣೆಯ ದೃಷ್ಟಿಯಿಂದ ಇವೆಲ್ಲವೂ ತೀವ್ರ ಆಂತಂಕಕಾರಿ ಬೆಳವಣಿಗೆ. ಆದುದರಿಂದ ಪ್ರತಿಯೊಬ್ಬ ಮಹಿಳೆಯೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕಿದೆ, ಶೋಷಣೆಯ ವಿರುದ್ಧ ಒಗ್ಗೂಡಿ ಧ್ವನಿ ಎತ್ತಬೇಕಿದೆ ಎಂದು ಮಲಯಾಳಂ ಉಪನ್ಯಾಸಕಿ ವಿನೀಷಾ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮಹಿಳೆಯರು ಯಾವುದೇ ಸಮಸ್ಯೆ ಎದುರಿಸಬೇಕಾಗಿ ಬಂದರೂ ಹಿಂಜರಿಯದೇ ಮುನ್ನುಗ್ಗಲು ಶ್ರಮಿಸಬೇಕಿದೆ. ಸಮಸ್ಯೆಗಳ ಮೆಟ್ಟಿ ನಿಲ್ಲಲು ಮನಸ್ಸನ್ನು ಕರಗತ ಮಾಡಿಕೊಂಡಲ್ಲಿ ಪರಿಹಾರ ತಾನಾಗಿಯೇ ದೊರೆಯುತ್ತದೆ. ಆದುದರಿಂದ ಹಿಂಜರಿಕೆ ಎಂದಿಗೂ ಪರಿಹಾರವಲ್ಲ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ಹಿಂದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದ, ಮಹಿಳೆಯರು ಒಂದೆಡೆ ಇಡೀ ಸಂಸಾರವನ್ನು ಸಂಭಾಳಿಸಿಕೊಂಡು ಇನ್ನೊಂದೆಡೆ ಉದ್ಯೋಗ ಕ್ಷೇತ್ರದಲ್ಲೂ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಬಹುತೇಕ ಪ್ರಮುಖ ಹುದ್ದೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದು, ರಾಷ್ಟ್ರದ ಅಭಿವೃದ್ಧಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಮನಿಷಾ ಸ್ವಾಗತಿಸಿದರು. ಮೆಗಲಕ್ಷ್ಮೀ ವಂದಿಸಿದರು. ದಿವ್ಯ ನಿರೂಪಿಸಿದರು.