ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸಂತ ಫಿಲೋಮಿನಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಒದಗಿಸಿದ ಹಾಗೂ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಗ್ರಹಣ ವೀಕ್ಷಕ ಉಪಕರಣಗಳನ್ನು ಬಳಸಿಕೊಂಡು ಶಿಬಿರಾರ್ಥಿಗಳು ಸೂರ್ಯ ಗ್ರಹಣ ವೀಕ್ಷಿಸಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಅಗಲ್ಪಾಡಿ ಶಾಲಾ ಅಧ್ಯಾಪಕ ರಾಜಶೇಖರ್, ಕಾಲೇಜಿನ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್ ಎಸ್., ಕಾಲೇಜಿನ ಸಿಬ್ಬಂದಿಗಳಾದ ರಾಧಾಕೃಷ್ಣ ವೈ. ಎಸ್., ಮಂಜುನಾಥ್ ಶೆಟ್ಟಿ, ಲೈಬ್ರೆರಿಯನ್ ರೇಣುಕಾ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.