ಪೆರ್ಲ: ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದಲ್ಲಿ ನಿವೃತ್ತ ಸಿಆರ್ ಪಿಎಫ್ ಅಕಾರಿ ಅಪ್ಪಯ್ಯ ಮಣಿಯಾಣಿ ಬಿ., ಬಿಎಸ್ ಎಫ್ ಯೋಧರಾದ ಬಾಲಕೃಷ್ಣ ಬದಿ ಮತ್ತು ರಮೇಶ್ ನಾಯ್ಕ್ ಬಿ.ಅವರನ್ನು ಸನ್ಮಾನಿಸಲಾಯಿತು.
ರವೀಶ್ ತಂತ್ರಿ ಕುಂಟಾರು ಶಾಲು ಹೊದಿಸಿ ಗೌರವಿಸಿದರು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಷ್ಣು ನಾವಡ, ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚತ್ತಾಯ, ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ, ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಫಲ, ಫಲಕ ನೀಡಿ ಸನ್ಮಾನಿಸಿದರು.
ದೀಕ್ಷಿತ್ ಶೆಟ್ಟಿ ಬಜಕೂಡ್ಲು, ಉದಯ ’ಶುಭಂ’ ಪೆರ್ಲ ಮತ್ತು ಸುನಿಲ್ ಕುಮಾರ್ ಅಡ್ಕಸ್ಥಳ ಸನ್ಮಾನ ಪತ್ರ ಓದಿದರು.ಸಂಘಟಕ ಅಜಯ್ ಪೈ ಉಪಸ್ಥಿತರಿದ್ದರು.