ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ವಿಶ್ವ ಪ್ರಾಣಿ ಸಂರಕ್ಷಣಾ ದಿನಾಚರಣೆಯಲ್ಲಿ ಉಪನ್ಯಾಸಕಿ ವಿನೀಷಾ
ಮಾನವ ಭೂಮಿಯ ಮೇಲಿನ ಇತರ ಜೀವಿಗಳ ಬದುಕುವ ಹಕ್ಕನ್ನು ಕಸಿಯುತ್ತಿದ್ದು, ಮಾನವಂತೆ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಎಂದು ಮಲಯಾಳಂ ವಿಭಾಗದ ಉಪನ್ಯಾಸಕಿ ವಿನೀಷಾ ಹೇಳಿದರು.
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ವಿಶ್ವ ಪ್ರಾಣಿ ಸಂರಕ್ಷಣಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇತ್ತೀಚೆಗೆ ಹಲವು ಪ್ರಾಣಿ, ಪಕ್ಷಿಗಳು ವಂಶ ನಾಶ ಭೀತಿಯನ್ನು ಎದುರಿಸುತ್ತಿದ್ದು, ಇವುಗಳ ಸಂರಕ್ಷಣೆಗೆ ಒತ್ತು ನೀಡದಿದ್ದಲ್ಲಿ, ಮುಂದಿನ ಪೀಳಿಗೆಯವರಿಗೆ ಅವುಗಳ ಫೋಟೋ ಮಾತ್ರ ತೋರಿಸಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ಮಾತನಾಡಿ, ಕಾಡಿನ ಅನಿಯಂತ್ರಿತ ನಾಶದಿಂದಾಗಿ, ಪ್ರಾಣಿಗಳ ವಾಸಸ್ಥಳ ಇಲ್ಲದಾಗುತ್ತಿದ್ದು, ಪ್ರಾಣಿಗಳು ಕಾಡಿನಿಂದ ನಾಡಿನತ್ತ ಲಗ್ಗೆ ಇಡುತ್ತಿವೆ. ಮಾನವನ ಹಲವು ಅವಶ್ಯಕತೆ ಪೂರೈಸಲು ಮರಗಳನ್ನು ಕಡಿಯಬೇಕಾಗುತ್ತದೆ. ಆದರೆ ಮರಗಳನ್ನು ಕಡಿಯುವುದರಲ್ಲಿ ಸಮತೋಲನ ಕಾಪಾಡಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂದಂತೆ, ಮರವನ್ನು ಕಡಿಯಲು ಸುಲಭ ಆದರೆ ನೆಟ್ಟು ಬೆಳೆಸಿ ಮರವನ್ನಾಗಿಸಲು ಕಷ್ಟ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ, ಅಂಜನಾ, ಜಗತ್, ಅಭಿಲಾಶ್, ಅಜಿತ್ ಉಪಸ್ಥಿತರಿದ್ದರು. ಭವ್ಯಶ್ರೀ ಸ್ವಾಗತಿಸಿದರು. ಅನುಶ್ರೀ ವಂದಿಸಿದರು. ರೇಷ್ಮಾ ನಿರೂಪಿಸಿದರು.