×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನೆರೆ ಪರಿಹಾರ ನಿಧಿ ಸಂಗ್ರಹ

ಪೆರ್ಲ: ಕೇರಳದ ನೆರೆ ಸಂತ್ರಸ್ತರಿಗೆ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ಉದ್ದೇಶದೊಂದಿಗೆ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಸೋಮವಾರ ಪೆರ್ಲ ಪೇಟೆಯಲ್ಲಿ ನೆರೆ ಪರಿಹಾರ ನಿಧಿ ಸಂಗ್ರಹಿಸಲಾಯಿತು.

Flood Relief

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ಮಾತನಾಡಿ, ನೆರೆಯಿಂದಾಗಿ ಯಾವುದೇ ಸಮಸ್ಯೆ ಎದುರಿಸದೇ, ಬೆಚ್ಚಗಿನ ಮನೆಯಲ್ಲಿ ವಾಸಿಸುತ್ತ, ೩ ಹೊತ್ತು ಹೊಟ್ಟೆ ತುಂಬಾ ಆಹಾರ ಸೇವಿಸುವ, ಬಣ್ಣ ಬಣ್ಣದ ಬಟ್ಟೆ ಧರಿಸುವ, ನಾವು ಪುಣ್ಯವಂತರು. ಆದರೆ ಭೀಕಾರ ಮಳೆಯಿಂದಾಗಿ ಉಂಟಾದ ನೆರೆಯಿಂದಾಗಿ, ತಮ್ಮದನ್ನೆಲ್ಲ ಕಳೆದುಕೊಂಡ, ಮನೆಯಿಲ್ಲದೇ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುವ, ಒಂದು ಹೊತ್ತಿನ ಅನ್ನಕ್ಕೆ ಪರದಾಡುವ, ಉಡಲು ಬಟ್ಟೆ ಇಲ್ಲದೆ, ಉಟ್ಟ ಬಟ್ಟೆಯನ್ನೇ ಉಡುವಾ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿ, ನಮ್ಮಿಂದಾದ ಸಹಾಯ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಇಂದು ನಾವು ನಿರಾಶ್ರಿತರಿಗೆ ಆಸರೆ ಆದಲ್ಲಿ, ಮುಂದೊಂದು ದಿನ ನಮಗೆ ಆ ಪರಿಸ್ಥಿತಿ ಎದುರಾಗಿಸಬೇಕಾಗಿ ಬಂದಲ್ಲಿ ಇನ್ನೊಬ್ಬ ನಮಗೆ ಆಸರೆ ಆಗುತ್ತಾನೆ ಎನ್ನುವುದಲ್ಲಿ ಸಂಶಯವಿಲ್ಲ ಎಂದರು.

ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್, ಶ್ರೀನಿಧಿ, ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಅಭಿಲಾಶ್, ಅಜಿತ್, ಅಂಜನಾ, ಕಾವ್ಯ ಹಾಗೂ ಎನ್ನೆಸ್ಸೆಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.