ಅಣುಬಾಂಬು ಸ್ಫೋಟದ ಪರಿಣಾಮವಾಗಿ ತತ್ತರಿಸಿ ಹೋಗಿದ್ದ ಜಪಾನ್ ವಿಶ್ವದ ಆರ್ಥಿಕತೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ತಂತ್ರಜ್ಞಾನದಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಯುವಜನಾಂಗಕ್ಕೆ ಸ್ಪೂರ್ತಿದಾಯಕ ಎಂದು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತಾ ಹೇಳಿದರು.
ಹೀರೋಷಿಮಾ ದಿನದ ಅಂಗವಾಗಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಅಮೇರಿಕಾ ಜಪಾನ್ ನ ಹೀರೋಷಿಮಾ ಎನ್ನುವ ಪ್ರದೇಶಕ್ಕೆ ಅಣುಬಾಂಬು ಹಾಕಿ ೭೪ ವರ್ಷ ಕಳೆದಿದ್ದು, ಸವಾಲುಗಳನ್ನು ಮೆಟ್ಟಿ ನಿಂತು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಮೃತಾ ಹೇಳಿದರು.
ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್ ಹಾಗೂ ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಜಿತ್ ಉಪಸ್ಥಿತರಿದ್ದರು.
ಮನೋಜ್ ಸ್ವಾಗತಿಸಿದರು. ವಿನೋದ್ ವಂದಿಸಿದರು. ಅಶ್ವಿನಿ ನಿರೂಪಿಸಿದರು.